
ಉಸಿರಾಡುತಿದ್ದೆ ಹಾಯಾಗಿ,
ಜೀವಂತ ಮರವಾಗಿ,
ಬದುಕಿದ್ದೆ ನಾ ಪರರಿಗಾಗಿ,
ಪರರು ಕಡಿದರು ನನ್ನ ಅವರವರಿಗಾಗಿ...
ತೀಡಿದರು ನನ್ನ ಹಾಳೆಯಾಗಿ,
ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,
ಟಂಕ ಠಸ್ಸೆಯ ಏಟು ತಿಂದಾಗಿ,
ಹೊರ ಬಂದೆ ನಾ ಹತ್ತು ರೂಪಾಯಾಗಿ...
ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,
ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,
ಓಡಿದೆ ನಾ ಹತ್ತು ರೂಪಾಯಾಗಿ...
ಕೈಗಳಲಿ ಒದ್ದಾಡಿ,
ಒದ್ದೆಯಿಂದೆದ್ದೊಣಗಿ
ಮತ್ತೊದ್ದೆಯಾಗಿ
ಮುಪ್ಪೇರಿ ಮುದಿಯಾಗಿ ಬಿದ್ದೆನಾ ತುಂಡಾಗಿ..
ಈಗ ಬಿದ್ದಿರುವೆ ತಿರಸ್ಕೃತನಾಗಿ,
ಸಾರಿದ್ದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಿಂದೆ ಉಸಿರಾಡುತಿದ್ದೆ ಹಾಯಾಗಿ,
ನಾ ಜೀವಂತ ಮರವಾಗಿ!!!!
Awesome Namratha. I can tell this because I came across that broke 10 rupee note. And you have filled a life to that note. Really athma dinda barediruva ondu hathu rupaaee notina jeevana kathe.
ReplyDeleteI am very glad you liked it :)... I am so grateful to you all who are encouraging me to write, though i write very rare.
ReplyDeleteನಿಜಕ್ಕೂ ಬಹಳ ಸುಂದರವಾಗಿ ಬರೆದಿದ್ದಿರಾ..
ReplyDeleteOH! its toooo good, u knw hw i reacted whn i heard modala dina mauna frm u, its d same feeling, namsy, last line is toooooooo good.
ReplyDeletewher did u get d pic? i had never seen ths part of u.
ReplyDeletethere was this half note fallen bekaar in the sill of office staircase window..
ReplyDeleteHii nams...it is very well written.
ReplyDeleteNimma anisike galige "hrudaya sparshy" touch(bhavane galannu) kottidira....keep it up.
Baridagada/bareyalagada Bhavane galanna Barediduva nimma prayatna heege munduvariyali.
good job nams. you are showing thorough progress in each anisike you are writing. nice.
ReplyDeletethanks every one
ReplyDeleteನಮ್ರತಾ
ReplyDeleteಕವನ ತುಂಬಾ ಚೆನ್ನಾಗಿದೆ
ಜಗತ್ತೆಲ್ಲ ಹಣಕ್ಕೆ ಸಾಯುತ್ತಿದೆ
ಹರಿದದ್ದು ಹತ್ತು ರೂಪಾಯಿ ಅಲ್ಲ,
ಹರಿದದ್ದು ನಮ್ಮ ಮನಸು
ಹಣದ ಆಸೆಗೆ ಬಿದ್ದು ಮಾನವನೇ ಹರಿದು ಹಂಚಿ ಹೋಗಿದ್ದಾನೆ
ಮಾನವೀಯತೆ ಹರಿದಿದೆ
ಒಳ್ಳೆಯ ಕವನ
ನಿಮ್ಮ ಅಳಲು ನನಗೆ ಸರಿ ಎಂದು ಅನಿಸಿಕೆ. ಅಷ್ಟು ಮಾತ್ರವಲ್ಲ, ಜನರಿಗೆ ಒಂದು ವಸ್ತು ಅಥವಾ ಒಬ್ಬ ಮನುಷ್ಯನ ನಿಜವಾದ ಬೆಲೆ ತಿಳಿದಿಲ್ಲ... ಅವನು ಅದಕ್ಕೆ ತನ್ನದೇ ಆದ ಒಂದು ಬೆಲೆ ಕಟ್ಟುತ್ತಾನೆ.. ಅದೇ ವಿಪರ್ಯಾಸ.. ಇಷ್ಟಾದರೂ ನಾನು ಅತೀವ ಆಶಾವಾದಿ :).. ಮಾನವ ಜನಾಂಗದ ಮೇಲೆ ನನಗೆ ಇನ್ನೂ ವಿಶ್ವಾಸವಿದೆ.. ಎಷ್ಟೋ ಸಂದರ್ಭದಲ್ಲಿ ಮನುಷ್ಯ ತನ್ನ ನಿಜಗುಣವಾದ ಮಾನವೀಯತೆ ತೆಳೆದಿದ್ದಾನೆ.. ಎದನ್ನರಿತು ನಾನು ಸಂತಸದಲ್ಲಿದ್ದೇನೆ..
ReplyDelete"यद् भावं तद भवति "...