Saturday, February 27, 2010

ಭ್ರಾಂತಿ



ಭ್ರಾಂತು ಬಂದಿದೆ ನನಗೆ
ಈ ಭ್ರಮೆಯ ಬಗ್ಗೆ,
ತಿಳಿಯದಾಗಿದೆ ಎನಗೆ
ಈ ಭ್ರಾಂತಿ ಬಗ್ಗೆ.

ಸೋಜಿಗವು ನನಗೆ
ಭೂತಕಾಲದ ಬಗ್ಗೆ,
ನಿನ್ನೆ ಎಂಬ ಭೂತ
ಇಂದು ಕಾಡಿದಬಗ್ಗೆ.

ಬೇಸರವು ನನಗೆ
ಈ ಭ್ರಾಂತಿ ಬಗ್ಗೆ,
ನಾಳೆಯಾ ಭವ-ವಿಷಯ
ಸಿಗದೀಗಿಂದ ಈಗ್ಗೆ.

ಅನುಮಾನ ನನಗೆ
ವರ್ತಮಾನದ ಬಗ್ಗೆ,
ಇಂದು ಎಂಬುದು ನಿಜವೇ?
ಹೇಳಿದರಬಗ್ಗೆ.

ಸತ್ಯವೇ ಉದ್ಭವಿಸು
ಮನದಲ್ಲಿ ಈಗ್ಗೆ,
ಸಾಕ್ಷಾತ್ಕಾರ ಸ್ಫೋಟಿಸು
ಒಡೆದು ಈ ಭ್ರಾಂತಿ ಬುಗ್ಗೆ.

9 comments:

  1. Bhrame yamba bhranti bittu nijavemba sakshathkaravannu spotisuvudu thumba olleyadu.

    Artha poornavaagide.

    ReplyDelete
  2. ನಿಜವಾಗಲೂ ನಿಜ ಯಾವುದೆಂದು ಯಾರಿಗೂ ತಿಳಿದಿಲ್ಲ ಎಂದು ನನ್ನ ಭಾವನೆ.. ಅವರವರ ದೃಷ್ಟಿಕೋಣಕ್ಕೆ ತಕ್ಕಂತೆ, ತಮ್ಮ ದೇಹಸ್ಥಿತಿ ಮತ್ತು ಸಂದರ್ಭಕ್ಕೆ ತಕ್ಕಂತೆ ಒಂದು ವಿಚಾರವು ನಿಜ ಅಥವಾ ಸುಳ್ಳು ಎಂದು ಗೋಚರಿಸುತ್ತದೆ.
    ವಸ್ತು, ಸಮಯ, ವಿಚಾರ ಮುಂತಾದುವು ನಾವು ಬದುಕಿರುವ ತನಕ ಮಾತ್ರ ನಿಜ.. ನಮ್ಮ ನಂತರ ಅದು ಬರೇ ಸುಳ್ಳು.. ಜೀವ ಇರುವ ತನಕ ಮಾತ್ರ ಮನುಷ್ಯನ ವಿಚಾರಗಳು ಜೀವಂತ.. ಇದನ್ನು ನೇರವಾಗಲ್ಲದೆ ಪಾರಮಾರ್ಥಿಕವಾಗಿ ಯೋಚಿಸತಕ್ಕದ್ದು..

    ಎಂದಿನಂತೆ ಧನ್ಯವಾದಗಳು ಮತ್ತು ಸಹಕಾರ ಮುಂದುವರೆಯಲಿ ಎಂದು ಬೇಡುವೆ.

    ReplyDelete
  3. ನಮ್ರತಾ
    ಭ್ರಾಂತಿಯೇ ಹಾಗೆ,
    ಕೆಲವೊಮ್ಮೆ ನಿಜ ಅಂದುಕೊಂಡಿದ್ದು ಸುಲ್ಲಗುತ್ತದೆ
    ಸುಳ್ಳು ಎಂದುಕೊಂಡಿದ್ದು ನಿಜ
    ಒಳ್ಳೆಯ ಕವನ
    ''ಸತ್ಯವೇ ಉದ್ಭವಿಸು
    ಮನದಲ್ಲಿ ಈಗ್ಗೆ,
    ಸಾಕ್ಷಾತ್ಕಾರ ಸ್ಫೋಟಿಸು
    ಒಡೆದು ಈ ಭ್ರಾಂತಿ ಬುಗ್ಗೆ''
    ಸುಂದರ ಸಾಲುಗಳು

    ReplyDelete
  4. sundaravaada brameyalli telaaduthiruva namge vaasthavakke baruva iccheyuu kammi...adu olleyadu antha thilidaru...thathkaalika sukkake maaruhogutheve.
    good work nams...keep up ur good work:)

    ReplyDelete
  5. (vastu,samaya,vichara muntadavu .......badukiruva tanaka nija).-This is u r openion since u can not imagine something after death but that does not mean that it does not exists.I do beleive that even after death u do feel same things but in different reference.so, it may looks it is not the same but it is...(this is my openion..).So,difference in appearence always does not mean it is different.Explicitely saying-"bhavishaya dalli(after death for eg)Bhoota kala(jEEVANA)sullagbekagilla....
    Kavana chennagide. keepm it up.

    ReplyDelete
  6. hello anna, thanks for the comment.. you are right.. i am not saying that vastu, samaya and vichara do not exist after we are not there.. what i am trying to drive is, it no longer exists to us.. it holds no meaning to us after we are gone.. and for others as well after they are gone.. it should be seen in more philosophical way than practical.. at least i need not be practical in my poems i think...

    ReplyDelete