
ಹಸಿವಾಗಿದೆ ಉಸಿರೇರಿದೆ
ಕಾಡಿದೆ ಭಾವ ಬಡತನ,
ಅನ್ಯಾಯದಿ ಮನಗೆಟ್ಟಿದೆ
ಬೇಕಿದೀ ದುರ್ಗತಿ ದಮನ.
ಎಚ್ಚೆದ್ದಿದೆ ಭುಗಿಲೆದ್ದಿದೆ
ಮೈಕೊಡವಿದೆ ಜನಮನ,
ಸಮಚಿತ್ತದೆ ಮುನ್ನುಗ್ಗಿದೆ
ದೇಶ ದೇಶಾಂತರದ ಜನ.
ಭ್ರಷ್ಟಾಳ್ವಿಕೆ ಮಂಪರಿನೆವೆ
ಎಚ್ಚರಿಸಿದೆ ಕ್ರಂದನ,
ಬೆದರಿದಿಂದೆ ರಾಜಕಾರಣೆದೆ
ಕಂಡು ಪ್ರಜೆಗಳೊಮ್ಮನ.
ಬದುಕಿರಲಿ ಎಂದೆಡುವದೆ
ಒಗ್ಗಟ್ಟಿನ ಜನಬಲ,
ನಡೆದಿರಲಿ ತಡೆಯಿರದೆ
ಈ ಸಾತ್ವಿಕ ಚಿಂತನ.
ನಮ್ರತಾ,
ReplyDeleteಸರಳ, ಸುಂದರ, ಸಕಾಲಿಕ, ಪದ ನೇಯ್ಗೆ. ತುಂಬಾ ಚೆನ್ನಾಗಿದೆ.
ಅಣ್ಣಾ ರವರ ಬಗ್ಗೆ ಒಂದೆರಡು ಸಾಲುಗಳಿದ್ದಿದ್ದರೆ .... ಸಮಂಜಸವೂ, ಇನ್ನೂ ಸಕಾಲಿಕವೂ, ಮತ್ತೂ ಸತ್ಪಾತ್ರರಿಗೆ ಸಲ್ಲ್ಲುವ ಗೌರವ ಗುಛ್ಛ ವಾಗುತ್ತಿತ್ತು. - ರಮೇಶ
ಅಣ್ಣಾರಂಥವರು ಇಲ್ಲಿ ಒಂದಿಬ್ಬರು ಇರಬಹುದು.. ಅಣ್ಣರ ಬಗ್ಗೆ ಮಾತಾಡಲು ಒಂದು ಸಾಲು ಸಾಲದು..
ReplyDeleteಆದರೆ ಹೀಗೆ ಜನರು ಒಗ್ಗೂಡುವುದು ಅಸಾಧಾರಣ.. ಇದು ಜನರು ಎಚ್ಚೆತ್ತ ಬಗೆಯ ಸಂತಸದ ಅಭಿವ್ಯಕ್ತಿ.. ಜನರ ಇಚ್ಛಾಶಕ್ತಿ ಮತ್ತು ಜ್ಞಾಪಕ ಶಕ್ತಿ ಹೀಗೇ ಇರಲಿ ಎಂದು ಆಶಿಸುತ್ತೇನೆ..
really good!!!
ReplyDelete